( 4 Oct, 2015) ಸಂವಿಧಾನ ಸಮರ್ಪಣಾ ದಿನ Published By : upscgk.com ನವೆಂಬರ್ 26 1949, ರಂದು ಸಂವಿಧಾನ ರಚನಾ ಕಾರ್ಯ ಪೂರ್ಣಗೊಂಡು ಸಂವಿಧಾನವನ್ನು ದೇಶಕ್ಕೆ ಸಮರ್ಪಿಸಲಾಯಿತು. ಆದರೆ ಸಂವಿಧಾನ ವಿಧಿವತ್ತಾಗಿ ಜಾರಿಗೆ ಬಂದಿದ್ದು ಜನೆವರಿ 26,1950 ರಂದು. ಸಂವಿಧಾನ ದೇಶಕ್ಕೆ ಸಮರ್ಪಿಸಿ ಇಂದಿಗೆ 65 ವರ್ಷಗಳು ಸಂದಿವೆ. ಸಂವಿಧಾನ ರಚನಾ ಕಾರ್ಯ 1949 ನವೆಂಬರ್ 26 ಕ್ಕೆ ಪೂರ್ಣಗೊಂಡರು ಸಹ ಅದನ್ನು 1950 ಜನೆವರಿ 26, ರಂದು ಜಾರಿಗೆ ತರಲು ಒಂದು ಪ್ರಮುಖ ಕಾರಣವೆನೆಂದರೆ, 1930 ರ ಕಾಂಗ್ರೆಸ್ಸ್ ಅಧಿವೇಶನ ಲಾಹೋರಿನಲ್ಲಿ ಜರುಗಿತು. ಇದರ ಅಧ್ಯಕ್ಷತೆಯನ್ನು ಜವಾಹರಲಾಲ್ ನೆಹರೂರವರು ವಹಿಸಿಕೊಂಡಿದ್ದರು. ಈ ಲಾಹೋರಿನ ಅಧಿವೇಶನದಲ್ಲಿ ಭಾರತಕ್ಕೆ ಪೂರ್ಣ ಸ್ವಾತಂತ್ರ್ಯ(ಪೂರ್ಣ ಸ್ವರಾಜ್ಯ) ಪಡೆಯುವ ನಿರ್ಧಾರ ಕೈಗೊಳ್ಳಲಾಯಿತು ಹಾಗೆಯೇ ಜನೆವರಿ 26 ರಂದು ಸ್ವತಂತ್ರ ದಿನವನ್ನಾಗಿ ಆಚರಿಲಾಯಿತು.ಲಾಹೋರಿನ ರಾವಿ ನದಿ ದಂಡೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಆ ಕಾರಣಕ್ಕಾಗಿಯೇ ಸಂವಿಧಾನವನ್ನು 26 ಜನೆವರಿಯಂದು ಜಾರಿಗೆ ತರಲಾಯಿತು, ಅಲ್ಲದೇ ಆ ಕಾರಣಕ್ಕಾಗಿಯೇ ದೇಶದಾದ್ಯಂತ 26 ಜನೆವರಿಯನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ.