( 4 Oct, 2015) ಸ್ವತಂತ್ರ ಭಾರತದ ಮೊದಲ ಮತದಾರ Published By : upscgk.com 'ಶ್ಯಾಮ ಶರಣ ನೇಗಿ' ಸ್ವತಂತ್ರ ಭಾರತದ ಮೊಟ್ಟ ಮೊದಲ ಮತದಾರ. ನೇಗಿ ಜನಿಸಿದ್ದು ಹಿಮಾಚಲ ಪ್ರದೇಶದ ಕಲ್ಪಾದಲ್ಲಿ, ನೇಗಿ ವೃತ್ತಿಯಲ್ಲಿ ಶಿಕ್ಷಕ, ಭಾರತದಲ್ಲಿ ಮೊದಲ ಬಾರಿಗೆ 1951 ರಲ್ಲಿ ಸಾರ್ವತ್ರಿಕ ಚುನಾವಣೆ ಪ್ರಾರಂಭವಾಯಿತು. ಬಹುತೇಕ ಭಾರತದಲ್ಲಿ 1952 ರ ಫೆಬ್ರುವರಿಯಲ್ಲಿ ಚುನಾವಣೆಗಳು ನಡೆದವು, ಆದರೆ ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತದ ಕಾರಣದಿಂದ ಐದು ತಿಂಗಳು ಮೊದಲೇ ಚುನಾವಣೆಗಳು ಪ್ರಾರಂಭವಾದವು. ಆದರೆ ಆ ಸಮಯದಲ್ಲಿ ಮತದಾರರು ಮತಗಟ್ಟೆಗೆ ತೆರಳುವುದು ದುಸ್ತರವಾಗಿತ್ತು.ಮತಗಟ್ಟೆ ಅಧಿಕಾರಿಯಾಗಿದ್ದ ನೇಗಿ ಮೊದಲಿಗೆ ತಮ್ಮ ಮತವನ್ನು ಚಲಾಯಿಸಿದರು, ಅಲ್ಲದೇ ಇತ್ತೀಚಿಗೆ 2014 ರಲ್ಲಿ ಜರುಗಿದ ಲೋಕಸಭೆಯ ಚುನಾವಣೆಯಲ್ಲಿ ಮತ ಚಲಾಯಿಸಿದು ಹೀಗಾಗಿ ನೇಗಿ ಭಾರತದ ಮೊದಲ ಹಾಗೂ ಹಿರಿಯ ಮತದಾರ ಎನ್ನುವ ಖ್ಯಾತಿಗೆ ಒಳಗಾಗಿದ್ದಾರೆ.